ಶ್ರೇಣಿಕೃತ ಸಮಾಜದ ಫಲಾನುಭವಿಗಳು ನೆಹರು ವಿರೋಧಿಗಳು - ಸಂತೋಷ್ ಶೆಟ್ಟಿ ಹಿರಿಯಡ್ಕ
Kemmannu News Network, 01-12-2024 14:32:35
ಉಡುಪಿ: ಸಂವಿಧಾನದ ಮೂಲ ಆಶಯಕ್ಕೆ ಬದ್ಧರಾಗಿ ಆಡಳಿತವನ್ನು ಮಾಡಿ ಈ ದೇಶಕ್ಕೆ ಭದ್ರ ಬುನಾದಿ ಹಾಕಿದ ನೆಹರೂರವರನ್ನು ವಿರೋಧಿಸುವ ಕೆಲಸ ಕಾರ್ಯ ಇಂದಿನ ದಿನಮಾನದಲ್ಲಿ ಜರಗುತಿದೆ. ಶ್ರೇಣಿಕೃತ ಸಮಾಜದ ವ್ಯವಸ್ಥೆಯಲ್ಲಿ ಲಾಗಾಯಿತಿನಿಂದ ಫಲಾನುಭವಿ ಆಗಿರುವ ವರ್ಗವೊಂದು ನೆಹರು ಅವರನ್ನು ನೆಹರೂ ಅವರ ವಿಚಾರಧಾರೆಯನ್ನು ವಿರೋಧಿಸುತ್ತಿದೆ. ಅವರ ದ್ವೇಷ ಇರೋದು ನೆಹರು ಒಪ್ಪಿಕೊಂಡ ಸಂವಿಧಾನದ ಮೇಲೆ .ಆದರೆ ಸಂವಿಧಾನವನ್ನು ನೇರವಾಗಿ ವಿರೋಧಿಸಿದರೆ ಕಾನೂನಾತ್ಮಕವಾಗಿ ಸಮಸ್ಯೆ ಬರಬಹುದು ಎಂಬ ಧೋರಣೆಯಿಂದ ನೆಹರೂರನ್ನು ವಿರೋಧಿಸುತ್ತಿದ್ದಾರೆ.
ದೇಶ ಸ್ವತಂತ್ರ ಪಡೆಯುವಾಗ ಅತ್ಯಂತ ಬಡತನದಿಂದ ಕೂಡಿತ್ತು ಅದನ್ನು ಮುನ್ನಡೆಸುವ ಸವಾಲು ನೆಹರೂರವರ ಮೇಲಿತ್ತು. ಅವರು ಸಮರ್ಪಕವಾಗಿ ಆ ಸವಾಲನ್ನು ಎದುರಿಸಿ ಒಮ್ಮೆ ಹೋಳಾಗಿದ್ದ ದೇಶವನ್ನು ಮತ್ತೆ ಹೋಳಾಗದಂತೆ ವೈಜ್ಞಾನಿಕ ತಳಹದಿಯಲ್ಲಿ ದೇಶವನ್ನು ಕಟ್ಟಿದರು. ಅವರಿಗೆ ಸ್ಪಷ್ಟತೆ ಇತ್ತು ದೇಶವನ್ನು ವೈಜ್ಞಾನಿಕ ತಳಹದಿಯಲ್ಲಿ ಕಟ್ಟಿದರೆ ಮಾತ್ರ ದೇಶವನ್ನು ಮುನ್ನಡೆಸಬಹುದು ಎಂದು ಅದನ್ನು ಅವರು ಸಾಧಿಸಿದರು ಎಂದು ಖ್ಯಾತ ರಂಗಕರ್ಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಸಂತೋಷ್ ಶೆಟ್ಟಿ ಹಿರಿಯಡ್ಕ ಅವರು 2017 ನೇ ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನೆಹರು ಜಯಂತಿ - ಮಕ್ಕಳ ದಿನಾಚರಣೆಯ ಪ್ರಯುಕ್ತ ಜರಗಿದ ’ನೆಹರೂ ಮತ್ತು ಪ್ರಜಾಪ್ರಭುತ್ವ’ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.
ಅವರು ಮುಂದುವರೆಯುತ್ತಾ ದೇಶ ಸೇವೆ ಎಂದರೆ ಬಡತನದಲ್ಲಿ ನರಳುತ್ತಿರುವ ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲಕ್ಕೆತ್ತುವುದು, ಶ್ರಮಿಕರಿಗೆ ಮತ್ತು ಮಹಿಳೆಯರಿಗೆ ಬದುಕುವ ಹಕ್ಕನ್ನು ನೀಡುವುದು ಎಂಬುದನ್ನು ಸ್ಪಷ್ಟವಾಗಿ ನೆಹರೂರವರು ಅರಿತಿದ್ದರು. ಇದು ನಮ್ಮ ಸಂವಿಧಾನದ ಆಶಯವು ಆಗಿತ್ತು. ಪಂಚವಾರ್ಷಿಕ ಯೋಜನೆಯ ಮೂಲಕ ಕೈಗಾರಿಕಗಳನ್ನು ಸ್ಥಾಪಿಸಿದ ನೆಹರೂರವರು ಯುವ ಜನತೆ ಕೈಗೆ ಉದ್ಯೋಗ ದೊರೆತರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದರು. ಇಂದು ದೇಶದ ವರಮಾನದಲ್ಲಿ 50 ಲಕ್ಷ ಕೋಟಿಯಷ್ಟು ಮೊತ್ತ ನೆಹರು ಸ್ಥಾಪಿಸಿದ ಕೈಗಾರಿಕೆಗಳಿಂದ ಬರುತ್ತಿದೆ. ಇಂದು ದೇಶ ತಾಂತ್ರಿಕವಾಗಿ ಬೆಳೆಯಲು ಮುಖ್ಯ ಕಾರಣ ಇಸ್ರೋ ಸ್ಥಾಪನೆ. ಇಸ್ರೋ ಸ್ಥಾಪನೆ ಕಾಲದಲ್ಲಿ ದೇಶ ಬಡತನದಲ್ಲಿತ್ತು. ಆ ಹೊತ್ತು ಸ್ಥಾಪಿಸಲು ಹೊರಟಾಗ ವಿದೇಶಿಗರು ಬಡತನದ ಈ ಹೊತ್ತಲ್ಲಿ ಬಾಹ್ಯಾಕಾಶ ಸಂಶೋಧನ ಕೇಂದ್ರ ಏಕೆ ಎಂದು ಟೀಕಿಸಿದ್ದರು .ಆದರೆ ಅದೇ ದೇಶಗಳು ಇಂದು ತಮ್ಮ ಉಪಗ್ರಹ ಉಡಾವಣೆಗೆ ನಮ್ಮ ದೇಶದ ನೆರವುಯಾಚಿಸುತ್ತಿದ್ದಾರೆ ಇದು ನೆಹರೂರವರ ದೂರಾಲೋಚನೆ .ದೇಶವನ್ನು ಸಂವಿಧಾನ ಬದ್ಧವಾಗಿ ವೈಜ್ಞಾನಿಕ ತಳಹದಿಯಲ್ಲಿ ನೆಹರೂರವರು ಕಟ್ಟಿದ್ದಾರೆ ಇದಕ್ಕೆ ವ್ಯತಿರಿಕ್ತವಾಗಿ ಈ ದೇಶ ಚಲಿಸಿದರೆ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ ರವರು ಮಾತಾಡಿ ಇಂದು ಸಂವಿಧಾನವನ್ನು ಬದಲಾಯಿಸುವ ವಿಚಾರಗಳು ಕೇಳಿ ಬರುತ್ತಾ ಇದೆ. ನಮಗೆ ಗೌರವ ಕೊಡುವ ಸಂವಿಧಾನ ಬೇಕು ಎಂದು ಓರ್ವ ಧಾರ್ಮಿಕ ಮಹಾಶಯರು ಹೇಳುತ್ತಿದ್ದಾರೆ. ಆದರೆ ನಮಗೆ ಗೌರವ ಕೊಡುವ ಸಂವಿಧಾನ ಅಲ್ಲ ಎಲ್ಲರಿಗೂ ಗೌರವ ಕೊಡೋ ಸಂವಿಧಾನ ನಮ್ಮದು. ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಎಲ್ಲರನ್ನೂ ಗೌರವಿಸುವ ಸಂವಿಧಾನ ನಮ್ಮದು. ಅದನ್ನು ಉಳಿಸಿಕೊಳ್ಳಬೇಕಾಗಿದೆ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ನಾಯಕರನ್ನು ಮರೆಸುವ ಅಥವಾ ಹೀಯ್ಯಾಳಿಸುವ ಚಾಳಿ ಇಂದು ದೇಶದಲ್ಲಿ ಬೆಳೆಯುತ್ತಿದೆ. ಅದಕ್ಕೆ ಮೂಲ ಕಾರಣ ಸಾಮಾಜಿಕ ಜಾಲತಾಣಗಳು ಇದರ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮುಕಾಂಬೆ , ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ’ನೆಹರೂ ಮತ್ತು ಪ್ರಜಾಪ್ರಭುತ್ವ’ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ದೃಢಪತ್ರ ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸರಕಾರಿ ಪದವಿಪೂರ್ವ ಕಾಲೇಜಿನ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಸ್ಥೆಯ ವತಿಯಿಂದ ರೂಪಾಯಿ 25,000 ಸಹಾಯಧನವನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕ ರಾಜ್ಯ ಸರಕಾರ ಬೆಂಗಳೂರಿನ ಜವಾಹರ್ ಲಾಲ್ ಪ್ಲಾನೆಟೋರಿಯಂನಲ್ಲಿ ಆಯೋಜಿಸಿದ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಗಳಾದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಮಾ. ಜಯದೇವ್ ಪೂಜಾರಿ ಮತ್ತು ಕು. ಹನಿ ಪಿ.ಶೆಟ್ಟಿ ಅವರಿಗೆ ನಗದು ಸಮೇತ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಪ್ರಾರಂಭದಲ್ಲಿ ಅಧ್ಯಕ್ಷರಾದ ಶ್ರೀ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀಮತಿ ಹೆಲನ್ ಫೆರ್ನಾಂಡಿಸ್ ಮತ್ತು ಕಾರ್ಯದರ್ಶಿ ಶ್ರೀಮತಿ ಆಶಾ ವಾಸು ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಸುವೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷ ರಿಯಾಜ್ ಪಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Annual Church Feast 2025 | St Theresa’s Church, Kemmannu
Vespers 2025 | St. Theresa’s Church, Kemmannu
Final Journey of Rocky D’Souza | LIVE from Santhekatte
Confraternity Sunday | LIVE from St.Theresa’s Church, Kemmannu, Udupi
Final Journey of Wilson John Maxim Soares | LIVE from Santhekatte, Kemmannu
0:24 / 2:30:40 NEW YEAR MASS 2025 | LIVE from Kemmannu | Diocese of Udupi
CHRISTMAS MASS -2024 | St. Theresa’s Church, Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Flat for sale at Mandavi Casa Grande, Santhekatte, Udupi - Please contact 9845424071
Annual Day - 2024 | Carmel English School, Kemmannu
Final Journey of Juliana Lewis (88 years) | LIVE from Milagres, Kallianpur, Udupi
Naturya - Taste of Namma Udupi - Order NOW
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link