National Madhyamashree-2022 / 23 Award: Winner Journalists Laurence and Sanath Kumar.


Rons Bantwal
Kemmannu News Network, 27-07-2023 17:16:03


Write Comment     |     E-Mail To a Friend     |     Facebook     |     Twitter     |     Print


National Madhyamashree-2022 / 23 Award: Winner Journalist Laurence and Sanath Kumar.

Shri K.T Venugopal-KaPaSaMa National Madhyamashree-2022 / 23 Award Announced

SENIOR JOURNALISTS LAURENCE COELHO AND SANATH KUMAR BELAGALI WERE SELECTED

Mumbai, July.25: Kannadiga Patrakartara Sangha Maharashtra (KaPaSaMa) has announced the annual Shri K.T.Venugopal-KaPaSaMa National Madhyamshree - 2022 and 2023 awards that Lawrence Coelho, Editor of Divo Konkani weekly in Mumbai was selected for the Fourth Award and Senior Journalist Sanathkumar Belagali from Jamkhandi of Bagalkote district, Karnataka for the Fifth Award KaPaSaMa said in a release.

The decision of the recently held Executive Committee meeting of the Journalists Association and the award selection committee was chaired by Dr. Suneetha M. Shetty and co-members of the jury, Sa.Daya (Dayanand) and Gopal  Trasi have selected senior journalists like Lawrence Coelho and Sanath Kumara Belagali, the KaPaSaMa said in a release.

The award is presented annually in association with the Family of Shri Vikas Venugopal, Son of Late Shri K.T Venugopal and with the Fund of KaPaSaMa, which carries a cash prize of Rupees 25,000/- (Twenty Five Thousand) a Certificate and a Memento.

First Award (2019) was awarded Mumbai’s Senior Journalist Mr. Vasant Kalakoti. The second Award (2020) was awarded to a senior journalist in Mumbai Mr. G.K Ramesh and the Third Award (2021) was awarded to Mr. Achyuta M.Chevar, a senior journalist from Kasaragod, Kerala.

Kapasama Honorary General Secretary Sa.Daya (Dayanand) and Jt.Secretary Savita S. Shetty said in the announcement that this award will be presented in the presence of dignitaries at the award ceremony organized under the President ship of the Rons Bantwal (President KaPaSaMa) on Sunday, August 06th in the morning at Lotus Hall, Solitary Corporate Park, Andheri East Mumbai.

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2022 / 23   ಪ್ರಶಸ್ತಿ ಪ್ರಕಟ
ಹಿರಿಯ ಪತ್ರಕರ್ತರಾದ ಸನತ್ ಕುಮಾರ ಬೆಳಗಲಿ ಮತ್ತು ಲಾರೇನ್ಸ್ ಕುವೆಲ್ಹೋ ಆಯ್ಕೆ


ಮುಂಬಯಿ, ಜು.25: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2022 ಮತ್ತು 2023ನೇ ಸಾಲಿನ ಪ್ರಶಸ್ತಿ ಪ್ರಕಟಿಸಿದ್ದು, ಚತುರ್ಥ ಪುರಸ್ಕಾರಕ್ಕೆ ಮುಂಬಯಿ ಅಲ್ಲಿನ ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಹೋ ಇವರಿಗೆ ಹಾಗೂ ಪಂಚ ಪುರಸ್ಕಾರಕ್ಕೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಾವಳಗಿ ಮೂಲತಃ ಸನತ್ ಕುಮಾರ ಬೆಳಗಲಿ ಇವರನ್ನು ಆಯ್ಕೆ ಮಾಡಿದೆ ಎಂದು ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ನಡೆಸಲ್ಪಟ್ಟ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಮತ್ತು ತೀರ್ಪುಗಾರರ ಸಮಿತಿಯ ಸಹ ಸದಸ್ಯರಾದ ಸಾ.ದಯಾ ಮತ್ತು ಗೋಪಾಲ ತ್ರಾಸಿ ನಿರ್ಣಾಯದಂತೆ ನಾಡಿನ ಹಿರಿಯ ಪತ್ರಕರ್ತರಾದ ಲಾರೇನ್ಸ್ ಕುವೆಲ್ಹೋ ಮತ್ತು ಸನತ್ ಕುಮಾರ ಬೆಳಗಲಿ ಇವರನ್ನು ಆಯ್ಕೆ ಮಾಡಿದೆ ಎಂದು ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

ದಿ| ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸುಪುತ್ರ ಶ್ರೀ ವಿಕಾಸ್ ವೇಣುಗೋಪಾಲ್ ಪರಿವಾರದ ಸಹಕಾರÀ ಮತ್ತು ಕಪಸಮ ಸಂಘದ ಪ್ರಶಸ್ತಿನಿಧಿಯೊಂದಿಗೆ ವಾರ್ಷಿಕವಾಗಿ ಕೊಡಮಾಡುವ ಈ ಪ್ರಶಸ್ತಿಯು ರೂಪಾಯಿ 25,000/-(ಇಪ್ಪತ್ತೈದು ಸಾವಿರ) ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ  ಹೊಂದಿರುತ್ತದೆ.

ಪ್ರಥಮ ಪ್ರಶಸ್ತಿ (2019) ಮುಂಬಯಿಯ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಇವರಿಗೆ  ದ್ವಿತೀಯ ಪ್ರಶಸ್ತಿ (2020) ಮುಂಬಯಿಯಲ್ಲಿನ ಹಿರಿಯ ಪತ್ರಕರ್ತ ಶ್ರೀ ಜಿ.ಕೆ ರಮೇಶ್, ತೃತೀಯ ಪ್ರಶಸ್ತಿ (2021) ಕೇರಳ ಕಾಸರಗೋಡು ಅಲ್ಲಿನ ಹಿರಿಯ ಪತ್ರಕರ್ತ ಶ್ರೀ ಅಚ್ಯುತ ಎಂ.ಚೇವಾ ್ಹರ್ ಕೇರಳ ಅವರಿಗೆ ಪ್ರದಾನಿಸಿ ಗೌರವಿಸಲಾಗಿದೆ.

ಇದೇ ಆ.06ನೇ ಭಾನುವಾರ ಪೂರ್ವಾಹ್ನ ಲೋಟಸ್ ಸಭಾಗೃಹ, ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿü ಗಣ್ಯರ ಉಪಸ್ಥಿತಿಯಲ್ಲಿ ಈ ಪುರಸ್ಕಾರ ಪ್ರದಾನಿಸಲಾಗುವುದು ಎಂದು ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ಸಾ.ದಯಾ (ದಯಾನಂದ್) ಮತ್ತು ಜೊತೆ ಕಾರ್ಯದರ್ಶಿ ಸವಿತಾ ಎಸ್.ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲಾರೆನ್ಸ್ ಕುವೆಲ್ಹೋ

1945ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಮಣ್ ಇನ್ನಾ ಇಲ್ಲಿ ಜನ್ಮತಾಳಿದ ಲಾರೇನ್ಸ್ ಕುವೆಲ್ಲೋ ಮುಂಬಯಿನಲ್ಲಿ ಬಿಎ ಪದವೀಧರರು. ಪತ್ರಿಕಾ ರಂಗದಲ್ಲಿ ವಿವಿದೆಡೆ ಶ್ರಮಿಸಿದ ಇವರು 1995ರಲ್ಲಿ ಮುಂಬಯಿ ಫೆÇೀರ್ಟ್ (ವಿಟಿ) ಇಲ್ಲಿ ಸ್ವಂತ ಕಚೇರಿ ತೆರೆದು ದಿವೋ ಕೊಂಕಣಿ ವಾರಪತ್ರಿಕೆ ಹಾಗೂ ಸೆಕ್ಯೂಲರ್ ಸಿಟಿಝನ್ ಇಂಗ್ಲೀಷ್ ಸಾಪ್ತಾಹಿಕವನ್ನು ಪ್ರಾರಂಭಿಸಿದರು.

ಬೃಹನುಂಬಯಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರತ ಇವರು ಪತ್ನಿ ಸುಜನ್ಹಾ ಎಲ್.ಕುವೆಲ್ಲೋ ಅವರನ್ನು ಪ್ರಕಾಶಕಿಯಾಗಿಸಿ ಹಲವಾರು ಕೊಂಕಣಿ, ಕನ್ನಡ ಕೃತಿಗಳನ್ನು ಪ್ರಕಾಶಿಸಿದ್ದಾರೆ. ಸಾವಿರಾರು ಸಂಪಾದಕೀಯ, ಇತರ ಬರಹಗಳನ್ನೂ ಪ್ರಕಾಶಿರುವರು.

ಇನ್ನಾ ಗ್ರಾಮದ ಸಾಂತೂರು ಮೂಲತಃ ಕುವೆಲ್ಹೋ, ಅವರ ತಂದೆ ಮುಂಬಯಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದ ಕಾರಣ ಇವರು ಮುಂದೆ ಅನಿವಾರ್ಯ ಕಾರಣಗಳಿಂದ ಮುಂಬಯಿಗೆ ಬಂದು ಇಲ್ಲಿ ತಂದೆಯವರಿಗೆ ಸಹಕರಿಸುತ್ತಾ ಪದವಿ ಶಿಕ್ಷಣ ಪೂರೈಸಿ ನಿಧಾನವಾಗಿ ಸಾಂಘಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. 1980ರಲ್ಲಿ `ರಾಯಲ್ ಕ್ರಿಶ್ಚಿಯನ್ ಫ್ಯಾಮಿಲಿ ಆರ್ಗನೈಜೇಷನ್’ ಸಂಸ್ಥೆ ಹುಟ್ಟುಹಾಕಿ ಯುವ ಜನತೆಗೆ ತಮ್ಮ ಆಯ್ಕೆಯ ವಧು-ವರರನ್ನು ಕಲ್ಪಿಸಿ ಕಂಕಣಭಾಗ್ಯ ಒದಗಿಸಿರುವರು. ಸಮಾಜವನ್ನು ಜಾಗೃತಗೊಳಿಸುವ ಮತ್ತು ತಮ್ಮವರ ಸುದ್ದಿ ಬಿತ್ತರಿಸುವ, ಕೊಂಕಣಿ ಲೇಖಕರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ 1990ರಲ್ಲಿ `ದಿ ಸೆಕ್ಯುಲರ್ ಸಿಟಿಜ್ಹನ್’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದ್ದು ಈತನಕ ವ್ಯವಸ್ಥಾಪಕ ಸಂಪಾದಕರಾಗಿ ಪತ್ರಿಕೆಯನ್ನು ಪ್ರಕಾಶಿಸಿಸುತ್ತಿದ್ದಾರೆ.

1995ರಲ್ಲಿ  ಮುಂಬಯಿ ಮೂಲವಾಗಿರಿಸಿ ಕನ್ನಡ ಲಿಪಿಯಲ್ಲಿ ಕೊಂಕಣಿಗರ ಸಾಪ್ತಾಹಿಕ `ದಿವೋ’ ಕೊಂಕಣಿ ವಾರಪತ್ರಿಕೆ ಆರಂಭಿಸಿ ಸುಮಾರು ಮೂರು ದಶಕಗಳಿಂದ ಇಂದಿಗೂ ಪತ್ರಿಕೆಯನ್ನು ಮುನ್ನಡೆಸುತ್ತಿರುವುದು ಅಭಿಮಾನದ ಸಂಗತಿ.  ಈ ಮೂಲಕ ನೂರಾರು ಯುವ ಮತ್ತು ಉದಯೋನ್ಮುಖ ಲೇಖಕರು, ಕವಿಗಳು, ಕತೆಗಾರರನ್ನು ಬೆಳಕಿಗೆ ತಂದ ಶ್ರೇಯ `ದಿವೋ’ ವಾರಪತ್ರಿಕೆಯ ಸಂಪಾದಕರೂ, ಪ್ರಕಾಶಕರೂ ಆಗಿರುವ ಲಾರೆನ್ಸ್ ಕುವೆಲ್ಹೋ ಇವರಿಗೆ ಸಲ್ಲುತ್ತದೆ.  

2001ರಿಂದ ವರ್ಷಂಪ್ರತಿ ಪತ್ರಿಕೆಯು `ದಿವೋ ಸಾಹಿತ್ಯ ಪುರಸ್ಕಾರ’ ನೀಡುತ್ತಾ ಬಂದಿದ್ದು, ಈ ಪ್ರಶಸ್ತಿಯನ್ನು ವರ್ಷದ ಶ್ರೇಷ್ಠ ಕೊಂಕಣಿ ಲೇಖಕ ಹಾಗೂ ಪತ್ರಕರ್ತರಿಗೆ ತಲಾ ರೂಪಾಯಿ 25,000/- ರೂಪಾಯಿ, ಸ್ಮರಣಿಕೆ ನೀಡಿ ಗೌರವಿಸುತ್ತಿದ್ದಾರೆ. ಹಾಗೆಯೇ 2005ರಿಂದ ಇನ್ನೊಂದು ಪತ್ರಿಕೆ `ದಿ ಸೆಕ್ಯುಲರ್ ಸಿಟಿಜನ್ಸ್’ ವತಿಯಿಂದ ನೀಡಲಾಗುವ `ಜೀವಮಾನದ ಸಾಧನೆ’ ಪ್ರಶಸ್ತಿಯು ರೂಪಾಯಿ 50,000/- ನಗದು ಮೊತ್ತ ಹೊಂದಿದೆ. ಪತ್ರಿಕೆಗಳ ಆಶ್ರಯದಲ್ಲಿ ಹಲವಾರು ಸೆಮಿನಾರ್‍ಗಳನ್ನು ಆಯೋಜಿಸುತ್ತಿದ್ದು, ವಿಶೇಷವಾಗಿ ಸಾವಿರಾರು ಯುವಜನತೆಯನ್ನು ಒಗ್ಗೂಡಿಸಿ ರಾಷ್ಟ್ರದ ಸದ್ಪ್ರಜೆಗಳಾಗಿ ಭವ್ಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶ್ರಮಿಸಿದ್ದಾರೆ.

ಕನ್ನಡಿಗ ಪತ್ರಕರ್ತರ ಸಂಘದ ಆರಂಭದಿಂದಲೂ ಸಂಘದ ಅಜೀವ ಸದಸ್ಯರಾಗಿದ್ದು ಇವರಿಬ್ಬರೂ (ಸುಜನ್ಹಾ ಕುವೆಲ್ಹೊ) ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸಂಘವನ್ನು ಕಟ್ಟಿಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಯ ನಿರ್ದೇಶಕ ಆಗಿರುವ ಲಾರೇನ್ಸ್ ಅವರ ಕೊಂಕಣಿ ಕ್ಷೇತ್ರದಲ್ಲಿನ ಅನುಪಮ ಸೇವೆ ಮನವರಿಸಿ ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯು ಜೀವನÀ ಸಾಧನಾ ಪ್ರಶಸ್ತಿ-2019 ನೀಡಿ ಗೌರವಿಸಿದೆ. 2003ರಲ್ಲಿ ಡಾ| ಹರಿವಂಶ್ ರಾಯ್ ಬಚ್ಚನ್ ಅವಾರ್ಡ್ ಫಾರ್ ಜರ್ನಲಿಸಂ ಇದರ  `ಆಶೀರ್ವಾದ’ ಪ್ರಶಸ್ತಿ. ಕೊಂಕಣಿ ರೈಟರ್ಸ್ ಫೆÇೀರಂ, ಕರ್ನಾಟಕ ಇದರ ದಶಮಾನೋತ್ಸವ ಸಂದರ್ಭ (2004)ದ ಗೌರವ ಪುರಸ್ಕಾರಗಳು ಸೇರಿದಂತೆ ನೂರಾರು ಸಂಘ-ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಆದುದರಿಂದಲೇ ಕ್ರೈಸ್ತ ಕೊಂಕಣಿ ಸಮಾಜದಲ್ಲಿ ಲಾರೆನ್ಸ್ ಕುವೆಲ್ಹೋ ಅವರದ್ದು ಎದ್ದು ತೋರುವ ವ್ಯಕ್ತಿತ್ವವಾಗಿದೆ.


ಸನತ್ ಕುಮಾರ ಬೆಳಗಲಿ

ಸಾವಳಗಿ ಗ್ರಾಮ ಜಮಖಂಡಿ ತಾಲ್ಲೂಕು  ಬಾಗಲಕೋಟೆ ಜಿಲ್ಲೆ ಇಲ್ಲಿ ಜನ್ಮ ಪಡೆದ ಸನತ್ ಕುಮಾರ ಬೆಳಗಲಿ

70 ಪ್ರಾಯ ವರ್ಷಗಳ ಹಿರಿಯ ಪತ್ರಕರ್ತರು. ಕಿರಿಯ ವಯಸ್ಸಿನಿಂದಲೂ ಜಾತ್ಯತೀತ, ಪ್ರಗತಿಪರ ಚಿಂತನೆಗಳತ್ತ ಒಲವುಗಳು ಇವರ ಹವ್ಯಾಸವಾಗಿದ್ದು ಸಾಹಿತಿಗಳಾದ ಬಸವರಾಜ ಕಟ್ಟೀಮನಿ, ನಿರಂಜನ, ಜಿ.ರಾಮಕೃಷ್ಣ ಮತ್ತಿತರ ಸಾಹಿತಿಗಳ ಸಂಪರ್ಕವುಳ್ಳ ಪ್ರಭಾವಿ.

ಮೊದಲ ಬರಹ     ಸಂಯುಕ್ತ ಕರ್ನಾಟಕ (19.6.1975) ಸಾವಳಗಿಯಲ್ಲಿ ಓಕಳಿ ಹಬ್ಬದ ನೆಪದಲ್ಲಿ ಮಹಿಳೆಯ ರ ಮೇಲೆ ನಡೆಯುತ್ತಿದ್ದ ಶೋಷಣೆ ಕುರಿತು ಬರೆದ "ಷಂಡ ಸಮಾಜದಲ್ಲಿ ದುಶ್ಯಾಸನರ ಕೇಕೆ" ಲೇಖನ ಓದುಗರ ವಿಭಾಗದ ಬದಲು ಸಂಯುಕ್ತ ಕರ್ನಾಟಕದ ಮೊದಲ ಪುಟದಲ್ಲಿ ಪ್ರಕಟವಾಯಿತು. ಆಗ ಖಾದ್ರಿ ಶಾಮಣ್ಣ ಪತ್ರಿಕೆ ಸಂಪಾದಕರು ಮತ್ತು ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿ. ಲೇಖನ ಓದಿದ ಪರಿಣಾಮ ಮುಖ್ಯಮಂತ್ರಿ ಅವರು ಓಕಳಿ ಸಂದರ್ಭದಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಶೋಷಣೆ ತಡೆಗಟ್ಟಲು ಆ ಪ್ರದೇಶದಲ್ಲಿ ಓಕಳಿ ನಿಷೇಧಿಸಿದರು. 

ಪ್ರಗತಿಪಂಥ ಲೇಖಕರ ಸಂಘ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ (1980) ಸಾಹಿತ್ಯ    ರಚಿಸಿರುವರು.    ಜಾತ್ಯಾತೀತ ವಿವಾಹ ವೇದಿಕೆ ಮಾನವ ಮಂಪಟದಲ್ಲಿ ರವಿವರ್ಮಕುಮಾರ್, ಇಂದಿರಾ ಕೃಷ್ಣಪ್ಪ ಜೊತೆ ಟ್ರಸ್ಟಿಯಾಗಿರುವರು.

ದಾವಣಗೆರೆ ನಗರಸಭೆ ಸದಸ್ಯೆ ಶಶಿಕಲಾ ಬೆಳಗಲಿ ಜೊತೆ (3.71978) ವಿವಾಹವಾಗಿದ್ದು  ರಾಹುಲ ಬೆಳಗಲಿ, ಭುಪೇಶ ಬೆಳಗಲಿ ಮಕ್ಕಳನ್ನು ಹೊಂದಿರುವರು.

2001-ಜನವಾಹಿನಿ ಪತ್ರಿಕೆಯಲ್ಲಿ ಸುದ್ದಿಸಂಪಾದಕ-5 ವರ್ಷ ಸೇವೆ. 2005-ಸೂರ್ಯದಯ ಪತ್ರಿಕೆಯಲ್ಲಿ ಬ್ಯೂರೋ ಮುಖ್ಯಸ್ಥ, 2006-ಸಂಯುಕ್ತ ಕರ್ನಾಟಕ ದಾವಣಗೆರೆ ಬ್ಯೂರೋ ಮುಖ್ಯಸ್ಥ, 2007-ವಾರ್ತಾ ಭಾರತಿ ಬೆಂಗಳೂರು ಆವೃತ್ತಿ ಹೊಣೆಗಾರಿಕೆಯೊಂದಿಗೆ ವೃತ್ತಿ ಅನುಭವವುಳ್ಳವರಾಗಿದ್ದು1975ರಿಂದ ಸುಮಾರು 30 ವರ್ಷ ಸಂಯುಕ್ತ ಕರ್ನಾಟಕದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವರು.

ಅಂಕಣ ಬರಹ ವಿಶ್ವ ಪರ್ಯಟನೆ (ಸಂಯುಕ್ತ ಕರ್ನಾಟಕ, ಜನವಾಹಿನಿ), ಪ್ರಚಲಿತ (ವಾರ್ತಾಭಾರತಿ) ಇವರದ್ದಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್, ಗುಜರಾತ್ ಹತ್ಯಾಕಾಂಡ, ಕೋಮು ದಳ್ಳುರಿ, ಬಾಬಾ ಬುಡನಗಿರಿ ವಿವಾದ. ಬ್ರಾಹ್ಮಣ್ಯವಾದಿ ಭಾರತ-ದಲಿತ ಭಾರತ ಇವರ ಕೃತಿಗಳು.

ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ,     ಬುದ್ಧ ಪ್ರಶಸ್ತಿ, ಟಿಎಸ್‍ಆರ್ ಪತ್ರಿಕೋದ್ಯಮ ಪ್ರಶಸ್ತಿ, ವಿವಿಧ ಸಂಘಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳಿಗೆ ಭಾನಜರಾಗಿರುವರು.

Comments on this Article
Jossey Saldanha, Raheja Waterfront Fri, July-28-2023, 2:47
Congratulations Lawrence ...
Agree[1]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Congratulations to Msgr. Ferdinand Gonsalves on your Secordotal Ruby JubileeCongratulations to  Msgr. Ferdinand Gonsalves on your Secordotal Ruby Jubilee
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi