ಈ ಬಾರಿಯ ಶಾರ್ಜಾ ಕರ್ನಾಟಕ ಸಂಘದ ಮಯೂರ ಪ್ರಶಸ್ತಿ ಶ್ರೀ ಶೋಧನ್ ಪ್ರಸಾದ್ ಮಡಿಲಿಗೆ...


Gulf Kannadigaa

Write Comment     |     E-Mail To a Friend     |     Facebook     |     Twitter     |     Print


ಕರ್ನಾಟಕ ಸಂಘದ ಈ ಬಾರಿಯ "ಮಯೂರ ಪ್ರಶಸ್ತಿ" ಯನ್ನು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡು ಜನಪ್ರಿಯತೆಯನ್ನು ಪಡೆದಿರುವ ಶ್ರೀ ಶೋಧನ್ ಪ್ರಸಾದ್ ಅತ್ತಾವರ ಪಡೆಯಲಿದ್ದಾರೆ.

ಶಾರ್ಜಾ ಕರ್ನಾಟಕ ಸಂಘದ 9ನೇ ವಾರ್ಷೀಕೋತ್ಸವ ಆಜ್ಮಾನ್ ರಮದಾ ಹೋಟೆಲ್ ಮೆಜೆಸ್ಟಿಕ್ ಸಭಾಂಗಣದಲ್ಲಿ 2011 ಮೇ 13 ನೇ ತಾರೀಕು ಶುಕ್ರವಾರ ದಿನ ಪೂರ್ತಿ ನಡೆಯಲಿದ್ದು ಅತೀ ಗಣ್ಯರು ಭಾಗವಹಿಸಲಿದ್ದು "ಮಯೂರ ಪ್ರಶಸ್ತಿ ಪ್ರಧಾನ" ಸಮಾರಂಭವು ವಿಜೃಂಬಣೆಯಿಂದ ನಡೆಯಲಿದೆ.

 

ಅಂದಿನ ಸಮಾರಂಭದಲ್ಲಿ ಯು.ಎ.ಇ. ಮಟ್ಟದಲ್ಲಿ ನಡೆಯಲಿರುವ "ಮಯೂರ ರಾಜ" ಮಯೂರ ರಾಣಿ" ಗಾಯನ ಸ್ಪರ್ಧೆಯ ಅಂತಿಮ ಸುತ್ತಿನ ಪೈಪೋಟಿ ನಡೆಯಲಿದ್ದು ಅತ್ಯುತ್ತಮ ಗಾಯಕ, ಗಾಯಕಿ ಪ್ರತಿಭೆಗಳು ಕಿರೀಟವನ್ನು ತಮ್ಮ ಮುಡಿಗೇರಿಸಿ ಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಅಗಮಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲ್ಗೊಳ್ಳು ವಂತೆ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಮಹ್ಮದ್ ಶಹಾದ ನೂರ್ ಮತ್ತು ಕಾರ್ಯ ಕಾರಿ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.

ಮಯೂರ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಶ್ರೀ ಶೋಧನ್ ಪ್ರಸಾದ್

ಕೊಲ್ಲಿರಾಷ್ಟ್ರದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪರಿಚಿತರಾಗಿರುವ ಶೋಧನ್ ಪ್ರಸಾದ್ ಅತ್ಮೀಯವಾಗಿ ಸಾರ್ವಜನಿಕ ರಂಗದಲ್ಲಿ ಕಂಡುಬರುವ ವ್ಯಕ್ತಿತ್ವ. ಮಂಗಳೂರಿ ನ ಅತ್ತಾವರದಲ್ಲಿ ಮೇ 1 ನೇ ತಾರೀಕು 1060 ರಲ್ಲಿ ಶ್ರೀ ಜನಾರ್ದನ್ ಅಂಚನ್ ಮತ್ತು ಶ್ರೀಮತಿ ಸುಮತಿ ಅಮಿನ್ ದಂಪತಿಗಳ ಮಗನಾಗಿ ಜನಿಸಿದ್ದು. ಮಂಗಳೂರಿನ ಜೆರೋಸಾ ಅಯ೦ಡ್ ಮಿಲಾಗ್ರಿಸ್ ಫ್ರೌಡಶಾಲೆಯಲ್ಲಿ, ನಂತರದ ವಿದ್ಯಾಭ್ಯಾಸ ಸರ್ಕಾರಿ ಕಾಲೇಜು, ಸೈಂಟ್ ಅಲೋಸಿ ಯೇಸ್ ಕಾಲೇಜಿನಲ್ಲಿ 1980 ರಲ್ಲಿ ಬಿ.ಎ. ಪದವಿಯನ್ನು ಪಡೆದರು.

ದುರ್ಗ ಪ್ರಸಾದ್ ಸ್ಕೂಲ್ ಅಫ್ ಕಾಮರ್ಸ್ ನಲ್ಲಿ ಟೆಕ್ನಿಕಲ್ ಇನ್ಸ್ಟ್ರಕ್ಟರ್ ಆಗಿ, ಮಂಗಳೂರು ಪ್ರಭುದಾಸ್ ಲೀಲಾಧರ್. ಶೇರ್ ಬ್ರೋಕರ್ ಅಯ೦ಡ್ ಗೋಪಿನಾಥ್ ಶೆಣೈ, ಚಾರ್ಟರ್ಡ್ ಆಕೌಂಟ್ ಸಂಸ್ಥೆಗಳಲ್ಲಿ ಅಕೌಂಟೆಂಟ್ ಹುದ್ದೆಯಲ್ಲಿದ್ದು ನಂತರ ಮುಂಬೈಗೆ ಪಯಣ, ಕಮರನ್ ಲಿಂಕರ್ಸ್ ಚೆಂಬೂರ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಸುಲ್ತಾನೆಟ್ ಆಫ್ ಒಮಾನ್ ಗೆ ತೆರಳಿದರು.

1983 ರಲ್ಲಿ ಮಸ್ಕತ್ ನಲ್ಲಿ ಪ್ರುಡೆನ್ಸಿಯಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಸೇವೆ ಸಲ್ಲಿಸಿ 1995ರಲ್ಲಿ ಅಬುಧಾಬಿಗೆ ಬಂದು ನಾರ್ಥ್ರನ್ ಇನ್ಸೂರೆನ್ಸ್ ಕಂಪೆನಿ ನಂತರ ರಾಯಲ್ ಅಯಂಡ್ ಸನ್ ಅಲಿಯನ್ಸ್ ಇನ್ಸೂರೆನ್ಸ್ ನಲ್ಲಿ 2007 ರವರೆಗೆ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬ್ರಾಂಚ್ ಮ್ಯಾನೆಜರ್ ಆಗಿ ಟೊಕಿಯೋ ಮರೀನ್ ಅಯಂಡ್ ನಿಚಿಡೊ ಫೈರ್ ಇನ್ಸೂರೆನ್ಸ್ ಕಂಪೆನಿ ಯಲ್ಲಿ ಕರ್ತವ್ಯ ದಲ್ಲಿದ್ದಾರೆ.

ಸಾಂಸ್ಕೃತಿಕ ಕ್ಷೇತ್ರದಲ್ಲಿ....

ಶೋಧನ್ ಪ್ರಸಾದ್ ರವರ ಬಹುಮುಖ ಪ್ರತಿಭೆ. ಉತ್ತಮ ಬರಹಗಾರರು, ರಂಗಭೂಮಿ ಕಲಾವಿ ದರು, ಗಾಯಕರು, ನೃತ್ಯ ಸಂಯೊಜಕರು, ಚಿತ್ರರಚನೆ, ಕಂಚಿನ ಕಂಠದ ಧ್ವನಿ ಹೊಂದಿರುವ ಕಾರ್ಯಕ್ರಮ ನಿರೂಪಕರಾಗಿ ತಮ್ಮ ವ್ಯಕ್ತಿತ್ವದ ಮೂಲಕ ಜನಪ್ರಿಯರಾಗಿದ್ದಾರೆ. ನಟನೆ, ನಿರ್ದೇಶ ನದ ಮೂಲಕ ಅಬುದಾಭಿ ಇಂಡಿಯನ್ ಸೋಶಿಯಲ್ ಸೆಂಟರ್ ನ ವೇದಿಕೆಯಲ್ಲಿ ಹಲವಾರು ಸಾಮಾಜಿಕ, ಶೈಕ್ಷಣಿಕ, ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಿ ಜನ ಮೆಚ್ಚುಗೆಯನ್ನು ಪಡೆದಿ ದ್ದಾರೆ.

ಯು.ಎ.ಇ. ಪ್ರತಿಷ್ಠಿತ ಸಂಘಟನೆಗಳಾದ ಅಬುಧಾಬಿ ಕರ್ನಾಟಕ ಸಂಘ, ಅಬುಧಾಬಿ ಬಿಲ್ಲವ ಬಳಗ, ಯು.ಎ.ಇ. ಬಂಟ್ಸ್, ಬಿಲ್ಲಾವಾಸ್ ದುಬಾಯಿ ಇನ್ನು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯ ಅನಾವರಣವಾಗಿದೆ.

ಸಾಮಾಜಿಕ ಕ್ಷೇತ್ರದಲ್ಲಿ...

ನಮ ತುಳುವೆರ್ ಯು.ಎ.ಇ. ಸಂಘಟನೆಯ ಆಶ್ರಯದಲ್ಲಿ ಅಸಕ್ತರು, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಅಪಘಾತದಲ್ಲಿ ಮಡಿದವರ ಕುಟುಂಬದವರಿಗೆ ಧನ ಸಹಾಯ, ಬಡ ಕುಟುಂಬದ ಕೆಲವು ಮಂದಿಯ ಹೃದಯ ಶಸ್ತ್ರಚಿಕಿತ್ಸೆಗೆ ನೆರವು, ಜೈಲುಗಳಲ್ಲಿ ನಿರಪರಾಧಿ ವ್ಯಕ್ತಿಗಳನ್ನು ಬಿಡುಗಡೆ ಗೊಳಿಸುವಲ್ಲಿ ಸಂಬಧ ಪಟ್ಟ ಇಲಾಖೆ, ಅಧಿಕಾರಿಗಳ, ಸಂಸ್ಥೆಗಳ ಜೊತೆ ಪತ್ರವ್ಯವಹಾರ, ಮಾತುಕತೆಯ ಮೂಲಕ ಹಲವಾರು ಮಂದಿ ಅಮಾಯಕರನ್ನು ತಮ್ಮ ತಮ್ಮ ಕುಟುಂಬದರ ಜೊತೆಗೆ ಸೇರಿಸಲು ಊರಿಗೆ ಕಳುವಿಸಿದ ಹಲವಾರು ಉತ್ತಮ ಸೇವಾ ಕಾರ್ಯ ಮಾಡಿದ್ದಾರೆ.

 

ಶ್ರೀಮತಿ ಸಂಧ್ಯಾಪ್ರಸಾದ್ ರವರನ್ನು ಬಾಳಾ ಸಂಗಾತಿಯಾನ್ನಾಗಿ ಪಡೆದು ನಿಂದ್ಯಾ ಪ್ರಸಾದ್, ಶ್ರಾವ್ಯ ಪ್ರಸಾದ್ ಪುತ್ರಿಯರನ್ನು ಪಡೆದಿದ್ದಾರೆ. ಸಂಧ್ಯಾ ಪ್ರಸಾದ್ ರವರು ಕನ್ನಡ ತುಳು ಭಾಷೆಯ ನಾಟಕ ಗಳಲ್ಲಿ ನಟಿಸಿದ್ದಾರೆ. ಪುತ್ರಿಯರು ಉತ್ತಮ ನೃತ್ಯಗಾರ್ತಿಯಾಗಿದ್ದಾರೆ.

ಶೋಧನ್ ಪ್ರಸಾದ್ ರವರ ಪ್ರತಿಭೆ, ಸಾಧನೆ, ಸಮಾಜ ಸೇವೆಯನ್ನು ಗುರುತ್ತಿಸಿ ಅಬುಧಾಬಿ ಕರ್ನಾಟಕ ಸಂಘ, ಅಬುಧಾಬಿ ಬಿಲ್ಲವರ ಬಳಗ, ಬಿಲ್ಲವಾಸ್ ದುಬಾಯಿ ಮತ್ತು ನಾರ್ಥ್ರನ್ ಏಮಿರೇಟ್ಸ್, ಕನ್ನಡ ಸಂಘ ಅಲ್ ಐನ್ ಬುರೈಮ್ ಸಂಘ ಸನ್ಮಾನಿಸಿ ಗೌರವಿಸಿದೆ.

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ಮಯೂರ ಪ್ರಶಸ್ತಿ ಈ ಬಾರಿ ಸಮಾಜ ಸೇವೆಯಲ್ಲಿ ಶೋಧನ್ ಪ್ರಸಾದ್ರವರನ್ನು ಗುರುತ್ತಿಸಿ ನೀಡಿ ಗೌರವಿಸುತಿರುವುದು ನಿಸ್ವಾರ್ಥ ಸೇವೆಗೆ ಸಂದ ಗೌರವವಾಗಿದೆ.

ಗಲ್ಫ್ ಕನ್ನಡಿಗ ಬಳಗ ಸಮಸ್ಥ ವೀಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




| Special Program in collaboration with Kemmannu Y
View More

Final Journey Of Francis Paul Quadros (59 Years) | LIVE From UdupiFinal Journey Of Francis Paul Quadros (59 Years) | LIVE From Udupi
Final Journey of Sudeep Sebastian Gordon Martis (55 years) | LIVE from KalmadyFinal Journey of Sudeep Sebastian Gordon Martis (55 years) | LIVE from Kalmady
Final Journey of Tyron Pereira (57 years) | LIVE from Kalmady, UdupiFinal Journey of Tyron Pereira (57 years) | LIVE from Kalmady, Udupi
Final Journey of Lawrence M Lewis (82 years) | LIVE from Milagres, Kallianpur, UdupiFinal Journey of Lawrence M Lewis (82 years) | LIVE from Milagres, Kallianpur, Udupi
Final Journey of Salvadore Fernandes (76 Years) | LIVE from Shirva | UdupiFinal Journey of Salvadore Fernandes (76 Years) | LIVE from Shirva | Udupi
Final Journey of Dulcine Cecilia Mathias (89 years) | LIVE from Shirva | UdupiFinal Journey of Dulcine Cecilia Mathias (89 years) | LIVE from Shirva | Udupi
Titular Feast of St. Theresa Church, Kemmannu, UdupiTitular Feast of St. Theresa Church, Kemmannu, Udupi
Final Journey of Dolphy Louis Suares (61 years) | LIVE from Katapady | UdupiFinal Journey of Dolphy Louis Suares (61 years) | LIVE from Katapady | Udupi
Final Journey Of Mrs. Lenny Machado (74 Years) | LIVE From Kemmannu | UdupiFinal Journey Of Mrs. Lenny Machado (74 Years) | LIVE From Kemmannu | Udupi
Mount Rosary Church - Rozaricho Gaanch Sep, 2025 IssueMount Rosary Church - Rozaricho Gaanch Sep, 2025 Issue
Final Journey Of Mrs. Lilly D Souza (68Years) | LIVE From Mount Rosary, Santhekatte, UdupiFinal Journey Of Mrs. Lilly D Souza (68Years) | LIVE From Mount Rosary, Santhekatte, Udupi
ಅನ್-ಡು (UNDO) | A Konkani Short Film | ICYM Kallianpur Deaneryಅನ್-ಡು (UNDO) | A Konkani Short Film | ICYM Kallianpur Deanery
THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi DeaneryTHEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery
Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi