ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ
Kemmannu News Network, 25-11-2024 09:45:27
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ
ಮೇರು ವ್ಯಕ್ತಿತ್ವದ ಮೌನ ಸಮಾಜ ಸೇವಕನನ್ನು ಕಳೆದಂತಾಗಿದೆ - ತೋನ್ಸೆ ಜಯಕೃಷ್ಣ ಎ. ಶೆಟ್ಟಿ
ಮುಂಬಯಿ : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಜಿಲ್ಲಾಧ್ಯಕ್ಷರಾದ ಡಿ. ಆರ್. ರಾಜು ಅವರು ನ. 17 ರಂದು ಹೃದಯಘಾತದಿಂದಾಗಿ ನಿಧನ ಹೊಂದಿದ್ದು, ಅಗಲಿದ ಜಿಲ್ಲಾಧ್ಯಕ್ಷರಿಗೆ ಅರ್ಪಿಸಲು ನ. 23 ರಂದು ಬಿಲ್ಲವ ಭವನ, ಸಾಂತಾಕ್ರೂಸ್ ಪೂರ್ವ, ಇಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಯವರು ಮಾತನಾಡುತ್ತಾ ಒರ್ವ ಉದ್ಯಮಿಯಾಗಿ, ಮೌನ ಸಮಾಜ ಸೇವಕರಾಗಿ, ಧಾರ್ಮಿಕ ಚಿಂತಕರಾಗಿ ಹಾಗೂ ರಾಜಕಾರಿಣಿಯಾಗಿ ಜನಪ್ರಿಯರಾಗಿದ್ದ ಡಿ. ಆರ್. ರಾಜು ಅವರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ದಿಗಾಗಿ ಜಿಲ್ಲಾಧ್ಯಕ್ಷರಾಗಿ ಸಮಿತಿಯ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು ದೇವರೇ ಸಮಿತಿಗೆ ನೀಡಿದ ಸಮರ್ಥ ವ್ಯಕ್ತಿಯಾಗಿದ್ದರು. ತನ್ನ ಜೀವಿತ ಕಾಲದಲ್ಲಿ ಅವರು ಮಾಡಿದ ಜನಪರ ಸೇವೆಯಿಂದ ಅವರ ಜೀವನ ಸಾರ್ಥಕವಾಗಿದೆ. ತನ್ನ ಕೊನೆಯ ಗಳಿಗೆಯಲ್ಲಿ ಅಂದು ಬೆಳಿಗ್ಗಿನಿಂದ ಹಲವಾರು ಕಾರ್ಯಕ್ರಮಗಳಲ್ಲಿ ಬಾಗವಹಿಸಿದ ಅವರು "ಬೆಳಿಗ್ಗೆ ಸನ್ಮಾನ, ಸಂಜೆ ಸ್ಮಶಾನ" ಎಂಬಂತೆ ನಮ್ಮೆಲ್ಲರನ್ನು ಅಗಲಿದ್ದು, ಬಿಲ್ಲವ ಸಮುದಾಯವೂ ಸೇರಿ ಎಲ್ಲರ ಗೌರವಕ್ಕೆ ಪಾತ್ರರಾದ ಮೇರು ವ್ಯಕ್ತಿತ್ವ ಅವರದ್ದು. ಇಂತಹ ವ್ಯಕ್ತಿಯನ್ನು ಸಮಿತಿಯು ಕಳೆದುಕೊಂಡಿದ್ದು ಡಿ. ಆರ್. ರಾಜು ಅವರ ಪತ್ನಿ ಮತ್ತು ಮಕ್ಕಳಿಗೆ ಅವರ ಅಗಲಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂತಾಪವನ್ನು ವ್ಯಕ್ತಪಡಿಸಿದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಡಿ. ಆರ್. ರಾಜು ಅವರ ಅನಿರೀಕ್ಷಿತ ಅಗಲಿಕೆಯ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸುತ್ತಾ ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಕಾಲ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಿ. ಆರ್. ರಾಜು ಅವರು ತನ್ನ ಸರಳ ವ್ಯಕ್ತಿತ್ವದೊಂದಿಗೆ ಶಿಸ್ತಿನ ಸಿಪಾಯಿಯಾಗಿದ್ದು ರಾಜ ಪಥದಲ್ಲಿ ಸಾಗಿದವರು. ಜಿಲ್ಲೆಗಳ ಅಭಿವೃದ್ದಿಯ ಬಗ್ಗೆ ಸಮಿತಿಯ ಮೂಲಕ ಉಜ್ವಲ ಭವಿಷ್ಯದ ಕನಸನ್ನು ಕಂಡವರು ಅವರು. ಜಿಲ್ಲಾಧ್ಯಕ್ಷರಾಗಿ ಸಮಿತಿಗೆ ಸೂಕ್ತ ವ್ಯಕ್ತಿ ದೊರಕಿದ್ದು , ಮುಂದೆ ಇಂತಹ ವ್ಯಕ್ತಿ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ದೊರಕುವುದು ಕಷ್ಟಕರ ಎನ್ನುತ್ತಾ ಅಗಲಿದ ಅವರ ಆತ್ಮಕ್ಕೆ ಶ್ರಾದ್ದಾಂಜಲಿ ಅರ್ಪಿಸಿದರು.
ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಎಲ್. ವಿ. ಅಮೀನ್ ಅವರು ಡಿ. ಆರ್. ರಾಜು ಅವರಿಗೆ ಸಂತಾಪ ಪ್ಯಕ್ತಪಡಿಸುತ್ತಾ ಸೌಮ್ಯ ಸ್ವಭಾವದ ಸರಳ ವ್ಯಕ್ತಿತ್ವದ ರಾಜು ಅವರು ಸಮಿತಿಯ ಬಗ್ಗೆ ಹಾಗೂ ಜಿಲ್ಲೆಗಳ ಬಗ್ಗೆ ಉತ್ತಮ ವಿಚಾರವನ್ನು ಹೊಂದಿದ್ದರು. ಅವರು ಪ್ರಚಾರ ಬಯಸದೆ ದಾನ ಮಾಡುತ್ತಿದ್ದರು. ದೇವರಿಗೆ ಪ್ರಿಯರಾಗಿದ್ದರಿಂದ ಅವರು ಬೇಗನೇ ದೇವರ ಪಾದ ಸೇರಿದ್ದು ಸಮಿತಿಗೆ ಇಂತಹ ವ್ಯಕ್ತಿಯು ಸಿಗುವಂತಾಗಲಿ ಎಂದರು.
ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರು ಸಂತಾಪ ಸೂಚಿಸುತ್ತಾ ಬಿಸಿಸಿಐ ಮೂಲಕ ಡಿ. ಆರ್. ರಾಜು ಅವರು ಪರಿಚಿತರಾಗಿದ್ದು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಜಿಲ್ಲಾಧ್ಯಕ್ಷರಾದ ಸಂದರ್ಭದಲ್ಲಿ ಸಂತೋಷವಾಗಿದ್ದು, ಇಂದು ಬಿಲ್ಲವ ಸಮಾಜ ಬಾಂಧವರು ಸಮಾಜದ ಒರ್ವ ಗಣ್ಯ ವ್ಯಕ್ತಿಯನ್ನು ಅಗಲಿದಂತಾಗಿದೆ ಎಂದರು.
ಪ್ರಾರಂಭದಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಸಮಿತಿಯ ಜಿಲ್ಲಾಧ್ಯಕ್ಷರಾಗಿದ್ದ ದಿವಂಗತ ಡಿ. ಆರ್. ರಾಜು ಅವರ ಬಗ್ಗೆ ಕಿರು ಮಾಹಿತಿಯಿತ್ತರು.
ಜಿಲ್ಲಾ ಕಾರ್ಯದರ್ಶಿ ಜಿ. ಟಿ. ಆಚಾರ್ಯ, ಕಲಾ ಜಗತ್ತು ರೂವಾರಿ ತೋನ್ಸೆ ವಿಜಯಕುಮಾರ್ ಶೆಟ್ಟಿ, , ನ್ಯಾ. ಶಶಿಧರ ಯು ಕಾಪು, ಶಂಕರ್ ಕೆ. ಸುವರ್ಣ ಮೊದಲಾದವರು ಮಾತನಾಡುತ್ತಾ ಡಿ. ಆರ್. ರಾಜು ಅವರ ಅನಿರೀಕ್ಷಿತ ಅಗಲಿಕೆಯ ಬಗ್ಗೆ ಸಂತಾಪ ಸೂಚಿಸಿದರು.
ಸಮಿತಿಯ ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್,
ಸಂಜೀವ ಪೂಜಾರಿ, ಮಹೇಶ್ ಪೂಜಾರಿ ಕಾರ್ಕಳ, ಹ್ಯಾರಿ ಸಿಕ್ವೇರಾ, ಪಿ ಧನಂಜಯ ಶೆಟ್ಟಿ, ವಿ. ಕೆ. ಶಾನ್ ಬಾಗ್, ಪುರುಷೊತ್ತಮ ಎಸ್ ಕೋಟ್ಯಾನ್, ಪ್ರಕಾಶ್ ಎಂ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಮೌನ ಪ್ರಾರ್ಥನೆಯ ನಂತರ ಉಪಸ್ಥಿತರಿದ್ದ ಎಲ್ಲರೂ ದಿವಂಗತರ ಬಾವ ಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Annual Church Feast 2025 | St Theresa’s Church, Kemmannu
Vespers 2025 | St. Theresa’s Church, Kemmannu
Final Journey of Rocky D’Souza | LIVE from Santhekatte
Confraternity Sunday | LIVE from St.Theresa’s Church, Kemmannu, Udupi
Final Journey of Wilson John Maxim Soares | LIVE from Santhekatte, Kemmannu
0:24 / 2:30:40 NEW YEAR MASS 2025 | LIVE from Kemmannu | Diocese of Udupi
CHRISTMAS MASS -2024 | St. Theresa’s Church, Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Flat for sale at Mandavi Casa Grande, Santhekatte, Udupi - Please contact 9845424071
Annual Day - 2024 | Carmel English School, Kemmannu
Final Journey of Juliana Lewis (88 years) | LIVE from Milagres, Kallianpur, Udupi
Naturya - Taste of Namma Udupi - Order NOW
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link