ತಂತ್ರಜ್ಞಾನ ಯುಗದಲ್ಲಿ ಕಣ್ಮರೆ ಯಾಗುತ್ತಿರುವ ಕೌಟುಂಬಿಕ ಮೌಲ್ಯ: ಡಾ. ಬಿ. ಆರ್. ಪಾಲ್
Kemmannu News Network, 08-06-2024 09:53:36
ತಂತ್ರಜ್ಞಾನ ಯುಗದಲ್ಲಿ ಕಣ್ಮರೆಯಾಗುತ್ತಿರುವ ಕೌಟುಂಬಿಕ ಮೌಲ್ಯ: ಡಾ. ಬಿ. ಆರ್. ಪಾಲ್
ಮಂಗಳೂರು, ಜೂ. ೦೭: ಇದು ತಂತ್ರಜ್ಞಾನದ ಯುಗ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದಿಂದಾಗಿ ಮನುಷ್ಯನ ಬಹುತೇಕ ಕೆಲಸಗಳು ಸಲೀಸಾಗಿವೆ. ಆದರೂ ನಮ್ಮಲ್ಲಿ ಈಗ ಸಮಯ ಇಲ್ಲ ಎನ್ನುವ ಮಾತು ಆಶ್ಚರ್ಯ ತರಿಸುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಕೌಟುಂಬಿಕ ಮೌಲ್ಯಗಳು ಮಾಯವಾಗುತ್ತಿದೆ ಎಂದು ಎಂಆರ್‌ಪಿಎಲ್‌ನ ಒಎನ್‌ಜಿಸಿ ಮಂಗಳೂರು ಇದರ ಮುಖ್ಯ ಪ್ರಬಂಧಕ (ರಾಜ ಭಾಷಾ ವಿಭಾಗ) ಡಾ. ಬಿ. ಆರ್. ಪಾಲ್ ವಿಷಾದ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಮತ್ತು ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನ, ಪ್ರಯಾಗ್ ರಾಜ್ ಇದರ ಸಂಯುಕ್ತ ಆಶ್ರಯದಲ್ಲಿ ’ಹಿಂದಿ ಸಾಹಿತ್ಯದಲ್ಲಿ ವೃದ್ಧ ವಿಮರ್ಶೆ’ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನದ ಕಾರ್ಯಾಧ್ಯಕ್ಷ ಓಂಪ್ರಕಾಶ್ ತ್ರಿಪಾಠಿ, ಪ್ರಸ್ತುತ ಸನ್ನಿವೇಶದಲ್ಲಿ ವೃದ್ಧಾ ವಿಮರ್ಶೆ ಎನ್ನುವುದು ಅತಿ ಅವಶ್ಯಕವಾಗಿದೆ. ಈ ಕುರಿತು ಒಂದಷ್ಟು ವಿಚಾರ ಮಂಥನ ನಡೆಯಬೇಕಿದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಹೆಚ್ಚು ಪ್ರಾಮುಖ್ಯತೆಯನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಎರಡು ದಿನಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನದ ಸದಸ್ಯ ಡಾ. ಗೋಕುಲೇಶ್ವರ್ ಕುಮಾರ್ ದ್ವಿವೇದಿ, ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮ ಟಿ. ಆರ್., ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ನಾಗರತ್ನ ರಾವ್, ಐಕ್ಯೂಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಸಂಸದೀಯ ಸಲಹಾ ಸಮಿತಿ ಕೋಲ್ ಮಂತ್ರಾಲಯದ ಸದಸ್ಯ ಡಾ. ಪ್ರೇಮ್ ತನ್ಮಯ್, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಅಶ್ವಿನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Annual Day Celebration | Day-1 | Milagres English Medium School, Kallianpur
Annual Day Celebration | Day-2 | Milagres English Medium School, Kallianpur
Final Journey of Juliana Lewis (88 years) | LIVE from Milagres, Kallianpur, Udupi
Final Journey of Roque Harold D’Souza | LIVE from Manipal/Thottam | Udupi
Final Journey of Irene Mathias (89 years) | LIVE from Kemmannu
Final Journey of Ivan D’Lima (70 years) | LIVE From Barkur | Body Donated to KMC, Manipal
Final Journey of Serphine Noronha ( 93 Years ) | LIVE From Palimar
Rozaricho Gaanch October 2024 Issue from Mount Rosary Church, Kallianpur, Udupi
Milarchi Lara, Milagres Cathedral, Kallianpur, Parish Bulletin_ September 2024
Final Journey of Fr.Valerian Mendonca (75 years) | LIVE from Kallianpur,Udupi.
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Naturya - Taste of Namma Udupi - Order NOW
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link