ಒಡಿಸ್ಸಾ ರೈಲು ದುರಂತದ ಕಥೆ... ವ್ಯಥೆ.!


Rons Bantwal
Kemmannu News Network, 05-06-2023 18:37:31


Write Comment     |     E-Mail To a Friend     |     Facebook     |     Twitter     |     Print


ಒಡಿಸ್ಸಾ ರೈಲು ದುರಂತದ ಕಥೆ... ವ್ಯಥೆ.!

ಮುಂಬಯಿ (ಆರ್‍ಬಿಐ), ಜೂ.04: ಕಾಲುಗಳನ್ನ ಒದ್ದೆ ಮಾಡದೆ ಸಮುದ್ರ ದಾಟಬಹುದು...

ಆದರೆ ಕಣ್ಣುಗಳನ್ನು ಒದ್ದೆ ಮಾಡದೆ ಜೀವನವನ್ನು ಸಾಧಿಸಲು ಸಾಧ್ಯವಿಲ್ಲ! ನೋಡಿ..... ಮನೆಯಲ್ಲಿ ಹೇಳಿ ಹೋದವರು, ಹೇಳದೆ ಬಂದು ಸಂತಸ ಕೊಡಲು ಕಾದು ರೈಲು ಏರಿದವರು... ಮದುವೆಗೆ ಬಂದವರು,..  ಕೆಲಸಕ್ಕೆ ಹೋದವರು... ಪ್ರವಾಸಕ್ಕೆ ಬಂದವರು...ಹೆಣ್ಣು ನೋಡಲು ಬಂದವರು...ಹೆಣ್ಣುಕೊಡಲು ಬಂದವರು... ರಜೆ ಮುಗಿಸಿ ಶಾಲೆಗೆ ಹೋಗುವವರು ... ಕಾಲೇಜಿಗೆ ಹೋದವರು... ವ್ಯಾಪಾರಕ್ಕೆ ಹೋದವರು... ತನ್ನವರನ್ನು ಸೇರಲು ಹೋದವರು... ಆತ್ಮೀಯರನ್ನು ಭೇಟಿ ಮಾಡುವವರು.., ಆತ್ಮೀಯರನ್ನು ಬಿಡಲು ಹೋದವರು.. ತಮ್ಮವರ ಅಂತ್ಯಕ್ರಿಯೆಗೆ ಹೊರಟುವರು... ತಿಥಿಗೆ ಹೊರಟವರು …..ತೀರ್ಥಕ್ಕೆ ಹೊರಟವರು....ಸಂಬಂಧಿಕರ ಮನೆಯಲ್ಲಿ ಸಂತಸದಿಂದ ಇದ್ದು  ಹೊರಟವರು... ಹನಿಮೂನ್ ಗೆ ಹೊರಟು ಬದುಕಿನ ಖುಷಿ ಕಾಣುವ ಮೊದಲೇ ಹೊರಟು ಹೋದವರು...ತನ್ನೂರು ಬಿಟ್ಟು ಇನ್ನೊಂದು ಊರಿನಲ್ಲಿ ಬದುಕು ಕಟ್ಟಿ ವರ್ಷವಿಡೀ ಕೆಲಸ ಮಾಡಿ ತನ್ನ ಮಕ್ಕಳಿಗೆ ತನ್ನ ಪ್ರೀತಿಯ ಮಡದಿಗೆ ಬಟ್ಟೆ ಒಡವೆ ಮತ್ತು ಆಟಿಕೆಗಳನ್ನು ಹೊತ್ತು ಕನಸು ಕಾಣುತ್ತಾ ರೈಲಿನಲ್ಲಿ ಮರೆಯಾದ  ಕಾರ್ಮಿಕರು ...

ಒಡಿಸ್ಸಾದಲ್ಲಿ ನಡೆದ ರೈಲು ದುರಂತದಲ್ಲಿ  ಮಡಿದವರಲ್ಲಿ  ಒಬ್ಬೊಬ್ಬರದ್ದು ಒಂದೊಂದು ಕಥೆ.. ಸಾವಿಗೀಡಾದವರ ಸಂಖ್ಯೆ 300 ರ ಹತ್ತಿರ, ಗಾಯಗೊಂಡವರು ಸಾವಿರಕ್ಕೂ ಅಧಿಕ...!

ಭಾರತೀಯ ರೈಲೆಂದರೆ ಅದೊಂದು ಕುಟುಂಬ, ಅದೊಂದು ರಾಜ್ಯ, ಅದೊಂದು ದೇಶ, ಅಲ್ಲಿ ನಡೆಯುವ ಮಾತು ದೇಶದಿಂದ ಹಿಡಿದು ಪ್ರಪಂಚದೊಳಗಿನ ಎಲ್ಲಾ ವಿಷಯಗಳು ಕೂಡ ಬರುತ್ತದೆ.

ರಾಜಕೀಯದಿಂದ  ರಾಮನವರೆಗೂ ಅಲ್ಲನಿಂದ ಏಸುವಿನವರೆಗೆ ಮಾತುಗಳು ನಡೆಯುತ್ತದೆ. ತಾನು ತನ್ನ ತಿಂಡಿಯನ್ನು ಹಂಚುತ್ತಾ ಇನ್ನೊಬ್ಬರು ಕೊಟ್ಟ ತಿಂಡಿಯನ್ನು ತಿನ್ನುತ್ತಾ ಎಲ್ಲಿಯೂ ಸಿಗದವರು ಎಲ್ಲಿಯೋ ಸಿಕ್ಕಿ ಹೇಗೋ ಆತ್ಮೀಯರಾಗಿ ಸಾಗುವ ಈ ಬದುಕು ಭಾರತೀಯ ರೈಲಿನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಗೂ ತಿಳಿದ ವಿಚಾರ. ಭಾರತೀಯ ರೈಲು ಭಾವನೆಗಳ ತವರೂರು ಅಲ್ಲಿ ಕಷ್ಟ, ಸುಖ, ಶಾಂತಿ ನೆಮ್ಮದಿ, ಐಶ್ವರ್ಯ, ಆರೋಗ್ಯ ಎಲ್ಲವೂ ನಗಣ್ಯವಾಗುತ್ತದೆ . ತನ್ನ ಒಂದು ದಿನದ ಪ್ರಯಾಣದಲ್ಲಿ ತನ್ನ ಮನಸ್ಸಿನ ಎಲ್ಲವನ್ನು, ಯಾರೋ ತಿಳಿಯದವರ ನಡುವೆ ಹೇಳಿಬಿಟ್ಟು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇವೆ.  ತದನಂತರ ಆತ ಜೀವನಪೂರ್ತಿ ನಮಗೆ ಸಿಗದಿದ್ದರೂ ಕೂಡ ನಾವು ಅವನೊಡನೆ ಮಾತುಕತೆಗೆ ಇಳಿಯುತ್ತೇವೆ. ಪ್ರಯಾಣಿಕರೆಲ್ಲರೂ ನಮ್ಮ ಮನೆಯವರಾಗಿ ನಮಗೆ ಅತ್ಯಂತ ಆತ್ಮೀಯರಾಗಿ ಬಿಡುತ್ತಾರೆ. ಆತನ ಸುಖ ಕಷ್ಟಕ್ಕೆ ನಾವು ಹನಿಯಾಗುತ್ತೇವೆ. ಅಂತಹ ಆತ್ಮೀಯ ವಾತಾವರಣದಲ್ಲಿ ನಡೆಯುವ ಪ್ರತಿ ಪ್ರಯಾಣವು ಸ್ವಾರಸ್ಯಕರವಾಗಿದೆ.

ಮೊನ್ನೆ ಓಡಿಸ್ಸಾದಲ್ಲಿ ನಡೆದ ಕೋರಮಂಡಲ್  ಎಕ್ಸ್ಪ್ರೆಸ್ ಹಾಗೂ ಶಾಲಿಮಾರ್ ಎಕ್ಸ್ಪ್ರೆಸ್  ಡಿಕ್ಕಿಯಾಗುವ ಮೊದಲು ಎರಡು ರೈಲುಗಳ ಮಧ್ಯೆ ಇಂತಹ ಹಲವು ಸ್ವಾರಸ್ಯಕರ ಮಾತುಗಳು ಕಥೆಗಳು ನಡೆಯುತ್ತಿದ್ದವು ರಾತ್ರಿಯ ಊಟದ ಚರ್ಚೆ, ಮಲಗುವ ತಯಾರಿ, ಬೆಳಗ್ಗೆ ತನ್ನೂರು ಸೇರುವ ತವಕ , ಅಂತಾಕ್ಷರಿಯ ನಗುವಿನ ನಡುವೆ  ಪ್ರಯಾಣ ಗಮ್ಯ ಸ್ಥಾನದತ್ತ ಸಾಗುತ್ತಿತ್ತು.

ಆದರೆ ವಿಧಿ ಮಾತ್ರ ನಡುವೆ ಹೊಂಚು ಹಾಕಿ ಕುಳಿತಿತ್ತು! ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ , ಆದರೆ ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು ಎಲ್ಲಿಯೋ ಹೋಗಿ ನಡು ಹಾದಿಯಲ್ಲಿ ಬರುವ ಸಾವು ತುಂಬಾ ಭೀಕರ.  ಅದಕ್ಕಿಂತ ಸಂಕಷ್ಟ ಅದಕ್ಕಿಂತ ಸಂಕಟ ಯಾವುದು ಇರಲಿಕ್ಕಿಲ್ಲ. ಜೀವವೆಂದರೆ ಎಲ್ಲವೂ ಇದೆ ಜೀವ ಇಲ್ಲದಿದ್ದರೆ ಯಾವುದೂ ಇಲ್ಲ.

ಈ ಭೂಮಿಯಿಂದ ನಿರ್ಗಮಿಸುವ ವ್ಯಕ್ತಿ ಎಂದಿಗೂ ನಿಜವಾಗಿಯೂ ಜೀವ ಬಿಡುವುದಿಲ್ಲ, ಏಕೆಂದರೆ ಅವರು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ, ನಮ್ಮಮನಸಿನಲ್ಲಿ ಅವರು ಬದುಕುತ್ತಾರೆ. ಅದರೆ ಅಪಘಾತದಲ್ಲಿ ನಿರ್ಗಮಿಸಿದವರು ನಮ್ಮನ್ನು ಅನುದಿನವು ಕಾಡುತ್ತಾರೆ.

ನಾವು ಪ್ರಯಾಣದಲ್ಲಿ ಒಂದು ಮೊಬೈಲ್ ಅಥವಾ ಯಾವುದೇ ನಮ್ಮ ಸಾಮಾನುಗಳು ಕಳೆದು ಹೋದರೆ ಅದೆಷ್ಟು ಸಂಕಟ ಪಡುತ್ತೇವೆ! ಅದೆಷ್ಟು ವ್ಯಥೆ ಪಡುತ್ತೇವೆ . ಆದರೆ ಮೊನ್ನೆ ಅಪಘಾತದಲ್ಲಿ ಅನಾಥವಾಗಿ ಬಿದ್ದು ಕಳೆದು ಹೋದವರ ಸಾಮಾನುಗಳು ಪೆಟ್ಟಿಗೆಗಳು ಒಂದೊಂದು ಕಥೆ ಹೇಳುತ್ತವೆ. ಆ ಪೆಟ್ಟಿಗೆಯ ಒಳಗೆ ಅದೆಷ್ಟು ಆಸೆಗಳಿರಬಹುದು ಅದೆಷ್ಟು ಮಮತೆಗಳಿರಬಹುದೋ.... ಒಂದು ಮುಳ್ಳು ಚುಚ್ಚಿದರೆ ಆ ..ಅಮ್ಮ ಎನ್ನುವ ನಮ್ಮ ವೇದನೆ ಆ ಪ್ರಯಾಣಿಕರ ಕೈಕಾಲು ... ಹೃದಯವೇ ತುಂಡಾದಾಗ ಅದೆಷ್ಟು ಸಂಕಟವಾಗಿರಬಹುದು ಯೋಚಿಸುವಾಗಲೇ ಕಣ್ಣಂಚು ಒದ್ದೆಯಾಗುತ್ತದೆ  ಭಾವಗಳು ಸರಿದು ಕಣ್ಮರೆಯಾಗುತ್ತದೆ. ಹರಿದ ದೇಹ ಬಿಟ್ಟ   ಆತ್ಮಗಳು ಅದೆಷ್ಟು ವೇದನೆಯನ್ನು ಅನುಭವಿಸಿರಬಹುದು? ಅದೆಷ್ಟು ಚೀತ್ಕಾರ ಹಾಕಿರಬಹುದು?  ಬದುಕಿಗಾಗಿ ತಮ್ಮ ಆತ್ಮೀಯರನ್ನು ಅದೆಷ್ಟು  ಕರೆದಿರಬಹುದು.?  ಮಗು ಅಮ್ಮನನ್ನು ಕರೆದರೆ ಅಮ್ಮ ಮಗವನ್ನು ಉಳಿಸಲು ಅದೆಷ್ಟು ಶ್ರಮಪಟ್ಟಿರಬಹುದು.?

ಸಣ್ಣ ಸಣ್ಣ ಮಕ್ಕಳ ಆಟಿಕೆಗಳು  ರಕ್ತದ ನಡುವೆ ತೊಯ್ದ ಕೆಂಪಾಗಿ ಮಾರ್ಪಟ್ಟಾಗ ಯಾವ ಮನಸು ತಾನೇ ಕೂಗದು.? ಮುಗ್ಧ ಮನಸುಗಳಿಗೆ ತಿಳಿಯದ ಅತೀವ  ವೇದನೆ ಅದೆಷ್ಟು ಸಂವೇದನೆಗಳು ನಡೆದಿರಬಹುದು.?  ಸಾವು ಜೀವನದ ಅತ್ಯಂತ ಕ್ರೂರ ವಿಷಯವಾಗಿದೆ ಹೇಳಲು ಕೇಳಲು ಶಬ್ದವಿಲ್ಲ ಆ ಸಂದರ್ಭದಲ್ಲಿ. ಈ ರೈಲು ಅಪಘಾತ ಮನಸ್ಸಿನಲ್ಲಿ ಹಲವು ಕಾಲ ಉಳಿಯಲಿದೆ.  ವೇದನೆಗಳು ಹಂತ ಹಂತವಾಗಿ ಕಡಿಮೆಯಾದರೂ ಕೂಡ ಮನದಾಳದಲ್ಲಿ ಈ ಸಾವು ನಮ್ಮನ್ನು ಕಾಡುತ್ತಿರುತ್ತದೆ. ಆ ಸಂದು ಹೋದ ಆತ್ಮಗಳಿಗೆ ದೇವರು ತನ್ನ ಮಡಿಲಲ್ಲಿ ಸ್ಥಳಕೊಡಲಿ. ಅವರ ಕುಟುಂಬಿಕರಿಗೆ ಮರೆಯಲಾರದ ವೇದನೆಯಾದರೂ ಮರೆಯುವ ಶಕ್ತಿ ನೀಡಲಿ. ಅನಾಥರಾದ ಮಕ್ಕಳಿಗೆ ಯಾರಾದರೂ ದಾರಿದೀಪವಾಗಲಿ.  ಕಳೆದು ಹೋದ ಭಾವಗಳಿಗೆ ಬದುಕು ಇನ್ನೊಮ್ಮೆ ಬಣ್ಣ ತುಂಬಲಿ,  ಮುಂದೆ  ಎಂದೆಂದಿಗೂ ಇಂತಹ ಘಟನೆ ಮರುಕಳಿಸದಿರಲಿ.

ಭಾವಪೂರ್ಣ ಶ್ರದ್ಧಾಂಜಲಿ!
ದಿವಾಕರ್ ಶೆಟ್ಟಿ ಅಡ್ಯಾರ್

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Christmas 2024 - Livestreamed from Kemmannu, Udupi
View More

Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್
Final Journey of Leo J. Crasto (97 years) | LIVE from Kemmannu, UdupiFinal Journey of Leo J. Crasto (97 years) | LIVE from Kemmannu, Udupi
Final Journey of Fedrick Lewis (67 years) | LIVE from SanthekatteFinal Journey of Fedrick Lewis (67 years) | LIVE from Santhekatte
Final Journey of Mr. Charles D’Souza (63 years) | LIVE from UdyavarFinal Journey of Mr. Charles D’Souza (63 years) | LIVE from Udyavar
75th B’day & Silver Jubilee of Episcopal Ordination of Most Rev. Dr Gerald Isaac Lobo.75th B’day & Silver Jubilee of Episcopal Ordination of Most Rev. Dr Gerald Isaac Lobo.
Final Journey Of Richard Sequeira | Live From Barkur || Kemmannu channelFinal Journey Of Richard Sequeira | Live From Barkur || Kemmannu channel
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
inal Journey of Patrick John Dalmeida (78 years) | LIVE from Barkurinal Journey of Patrick John Dalmeida (78 years) | LIVE from Barkur
Annual Church Feast 2025 | St Theresa’s Church, KemmannuAnnual Church Feast 2025 | St Theresa’s Church, Kemmannu
Vespers 2025 | St. Theresa’s Church, KemmannuVespers 2025 | St. Theresa’s Church, Kemmannu
Final Journey of Rocky D’Souza | LIVE from SanthekatteFinal Journey of Rocky D’Souza | LIVE from Santhekatte
Confraternity Sunday | LIVE from St.Theresa’s Church, Kemmannu, UdupiConfraternity Sunday | LIVE from St.Theresa’s Church, Kemmannu, Udupi
Final Journey of Wilson John Maxim Soares | LIVE from Santhekatte, KemmannuFinal Journey of Wilson John Maxim Soares | LIVE from Santhekatte, Kemmannu
0:24 / 2:30:40 NEW YEAR MASS 2025 | LIVE from Kemmannu | Diocese of Udupi0:24 / 2:30:40 NEW YEAR MASS 2025 | LIVE from Kemmannu | Diocese of Udupi
CHRISTMAS MASS -2024 | St. Theresa’s Church, KemmannuCHRISTMAS MASS -2024 | St. Theresa’s Church, Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Annual Day - 2024 | Carmel English School, KemmannuAnnual Day - 2024 | Carmel English School, Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi