Kemmannu Panchayat organizes Prathibha Puraskar for outstanding Students
Pics: Harsha Studio, Kemmannu
Kemmannu News Network, 12-08-2022 18:32:55
Kemmannu Panchayat organizes Prathibha Puraskar for outstanding Students
Kemmannu, August 09: Thonse Panchayat, Kemmannu organized Prathibha Puraskar Award function for the children of SSLC and PUC. Children, who have scored above 90% marks were felicitated and given a cash prize on the occasion.
Panchayat President Mrs. Latha presided over the function. Srimati Dr. Niketana HOD, Kannada department of G. Shankar College was the main speaker on the occasion. Sri Hemant Kumar, Nodel officer of Agricultural Department was also present on the occasion
Panchayat member Mr.Idrees Hoode delivered the introductory speech. Panchayat Vice President Mr.Arun Fernandes welcomed the guests. Both guests and donors were welcomed with a bouquet.
Dr. Niketana spoke about the importance of organizing such programs to encourage the bright students and the monetary support from the donors could go a long way to move the children forward
Mr. Shekhar, Sanitary worker of the Panchayat who retired after serving for 40 years was honored on the occasion
Mrs. Kamala, PDO of Kemmannu Panchayat and Secretary Mr. Dinakar were present on the dais and co-ordinated to make the program successful.
ಕೆಮ್ಮಣ್ಣು ಗ್ರಾ ಪಂ ನಿಂದ ಪ್ರತಿಭಾ ಪುರಸ್ಕಾರ - ನಾಗರಿಕ ಸನ್ಮಾನ
ಕೆಮ್ಮಣ್ಣು: ಪಡುತೋನ್ಸೆ ಗ್ರಾಮದ ತೋನ್ಸೆ ಗ್ರಾ ಪಂ ಕೆಮ್ಮಣ್ಣು ವ್ಯಾಪ್ತಿಯ ನಿವಾಸಿಗಳಾಗಿದ್ದು, ಇತ್ತೀಚೆಗೆ ನಡೆದ SSಐಅ ಮತ್ತು PUಅ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಂತಹ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ದ ಮೂಲಕ ಗೌರವಿಸುವ ಮತ್ತು ಗ್ರಾ ಪಂ ನಲ್ಲಿ ಸತತ 40 ವರ್ಷಗಳ ಕಾಲ ಸ್ವಚ್ಛತಾಗಾರನಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶ್ರೀ ಕೆ.ಶೇಖರ ಅವರ ಸೇವೆಯನ್ನು ಗುರುತಿಸಿ ನಾಗರಿಕ ಸನ್ಮಾನ ಕಾರ್ಯದ ಮೂಲಕ ಅವರನ್ನು ಬೀಳ್ಕೊಡುವ ಕಾರ್ಯಕ್ರಮವನ್ನೂ ತೋನ್ಸೆ ಗ್ರಾಮ ಪಂಚಾಯತ್ ದಾನಿಗಳ ಸಹಕಾರದಿಂದ ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ನಿಕೇತನ (ಪ್ರಾಧ್ಯಾಪಕರು, ಡಾ.ಜಿ.ಶಂಕರ್ ಪದವಿ ಕಾಲೇಜು, ಉಡುಪಿ) ಮತ್ತು ಶ್ರೀ ಹೇಮಂತ್ ಕುಮಾರ್ (ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ ಮತ್ತು ಗ್ರಾ ಪಂ ನ ನೋಡಲ್ ಅಧಿಕಾರಿ) ಅವರು ಭಾಗವಹಿಸಿ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಸುಮಾರು 35 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಿದರು ಹಾಗೂ ಗ್ರಾಮ ಸ್ವಚ್ಛತಾಗಾರರಾಗಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಶೇಖರ ಅವರಿಗೆ ನಾಗರಿಕ ಸನ್ಮಾನವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳು , ಶಿಕ್ಷಣಕ್ಕೆ ಮಹತ್ವ ನೀಡಲು ಮುಂದಾಗಿ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸುವ ಮತ್ತು ಗ್ರಾಮದ ಸ್ವಚ್ಛತಗಾರರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಈ ರೀತಿ ಸಾರ್ವಜನಿಕ ಸನ್ಮಾನದ ಮೂಲಕ ಬೀಳ್ಕೊಡುವ ಮೂಲಕ ಒಂದು ಆದರ್ಶ ಆಡಳಿತವನ್ನು ನಡೆಸಲು ಮಾದರಿ ಹಾಕಿ ಕಾರ್ಯಕ್ರಮ ಸಂಯೋಜಿಸಿದ ಗ್ರಾ ಪಂ ಆಡಳಿತ ಮಂಡಳಿ ಮತ್ತು ಅದಕ್ಕೆ ಪೂರಕವಾಗಿ ಸ್ಪಂದಿಸಿ ತುಂಬು ಮನಸ್ಸಿನಿಂದ ದಾನ ನೀಡುವ ಮೂಲಕ ಸಹಕರಿಸಿದ ದಾನಿಗಳನ್ನು ಶ್ಲಾಘಿಸಿದರು. ಅದೇ ರೀತಿ ವಿದ್ಯಾರ್ಥಿಗಳು ಇಂದು ಪಡೆದ ನೆರವನ್ನು ನೆನಪಲ್ಲಿಟ್ಟುಕೊಂಡು ಮುಂದೆ ತಾವೂ ಅಶಕ್ತ ವಿದ್ಯಾರ್ಥಿಗಳಿಗೆ ನೆರವು ನೀಡುವ ಪರಿಪಾಠವನ್ನು ಆರಂಭಿಸಬೇಕು. ಬರೇ ಅಂಕಗಳ ಹಿಂದೆ ಬೀಳದೇ ಸಮಾಜದಲ್ಲಿ ಮಾದರಿಯಾಗುವ ನೈತಿಕ ಶಿಕ್ಷಣವನ್ನೂ ಪಡೆಯುವತ್ತ ಮುಂದಾಗಬೇಕು. ನೀಡುವ ನೆರವು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ಬೆಳೆಯಬೇಕು ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳಾದ ಮೇ. ಓಶಿಯನ್ ಪರ್ಲ್ಸ್ ಫಿಶರೀಸ್ ಪರವಾಗಿ, ಕೊಹಿನೂರು ಫಿಶ್ ಪ್ರೊಡಕ್ಸ್ ನ ತನ್ವೀರ್, ತೋನ್ಸೆ ಹೆಲ್ತ್ ಸೆಂಟರ್ ಗುಡ್ಡೇರಿ ಕಂಬ್ಳ ಇದರ ಆಡಳಿತ ನಿರ್ದೇಶಕ ಬಿ.ಎಂ.ಜಾಫರ್ , ಪ್ಯಾರಾಡೈಸ್ ಲಗೂನ್ ನ ಪ್ರವೀಣ್ ಕುಮಾರ್, ಕಾರ್ತಿಕ್ ಫಿಶರೀಸ್ ನ ಪರವಾಗಿ ಪುರುಷೋತ್ತಮ ಸಾಲ್ಯಾನ್, ಸೈಮ್ ಟ್ರೇಡರ್ಸ್ ನ ಇಮ್ತಿಯಾಜ್, ವಿದ್ಯುತ್ ಗುತ್ತಿಗೆದಾರ ಎನ್. ಮುನೀರ್ ಅಹಮ್ಮದ್ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಕಮಲಾ, ಉಪಾಧ್ಯಕ್ಷರಾದ ಶ್ರೀ ಅರುಣ್ ಫೆರ್ನಾಂಡೀಸ್, ಕಾರ್ಯದರ್ಶಿಶ್ರೀ ದಿನಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಾನಿಗಳ ಪರವಾಗಿ ಶ್ರೀ ಬಿ.ಎಂ.ಜಾಫರ್ ಅವರು ಮಾತನಾಡಿ ಗ್ರಾಮ ಪಂಚಾಯತ್ ಬರೇ ಅಧಿಕಾರ ಚಲಾಯಿಸಲು ಮಾತ್ರವಲ್ಲ, ಸಮಾಜಕ್ಕೆ ಪೂರಕವಾದ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಗಳನ್ನು ನಡೆಸುವುದರ ಮೂಲಕ ಮಾದರಿಯಾಗಿರುವ ಗ್ರಾಮ ಪಂಚಾಯತಿನ ಇಂತಹ ಸೇವೆಗಳಿಗೆ ಪೂರಕವಾಗಿ ನಾವು ಒಂದಿಷ್ಟು ಸಹಕಾರ ನೀಡಿದ್ದೇವೆ. ಅಂತಹ ದಾನಿಗಳನ್ನು ಗುರುತಿಸಿ ಮತ್ತಷ್ಟು ಸಾಮಾಜಿಕ ಸ್ಪಂದನೆಗೆ ತೊಡಗಿಸಿಕೊಳ್ಳುವ ಕಾರ್ಯ ನಡೆಸುತ್ತಿರುವ ಗ್ರಾ ಪಂ ನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಲತಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾ ಪಂ ಉಪಾಧ್ಯಕ್ಷ ಅರುಣ್ ಫೆರ್ನಾಂಡೀಸ್ ಸ್ವಾಗತಿಸಿದರು, ಸದಸ್ಯ ಶ್ರೀ ಮಹಮ್ಮದ್ ಇದ್ರೀಸ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶ್ರೀ ದಿನಕರ್ ಅವರು ಧನ್ಯವಾದವಿತ್ತರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಉಪಸ್ಥಿತರಿದ್ದ ದಾನಿಗಳ ಜೊತೆ ಎಫ್ 3 ಮರೈನ್ ಫಿಶರೀಸ್, ಆಕಾಶ್ ಐಸ್ ಪ್ಲ್ಯಾಂಟ್ ನವರೂ ದಾನಿಗಳಾಗಿ ಸಹಕರಿಸಿದ್ದರು
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
A Mega Health Camp & Basic Life Support Training at Milagres Cathedral, Kallianpur on 16th Feb, 2025

75th B’day & Silver Jubilee of Episcopal Ordination of Most Rev. Dr Gerald Isaac Lobo.

Final Journey Of Richard Sequeira | Live From Barkur || Kemmannu channel

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

inal Journey of Patrick John Dalmeida (78 years) | LIVE from Barkur

Annual Church Feast 2025 | St Theresa’s Church, Kemmannu

Vespers 2025 | St. Theresa’s Church, Kemmannu

Final Journey of Rocky D’Souza | LIVE from Santhekatte

Confraternity Sunday | LIVE from St.Theresa’s Church, Kemmannu, Udupi

Final Journey of Wilson John Maxim Soares | LIVE from Santhekatte, Kemmannu

0:24 / 2:30:40 NEW YEAR MASS 2025 | LIVE from Kemmannu | Diocese of Udupi

CHRISTMAS MASS -2024 | St. Theresa’s Church, Kemmannu

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Annual Day - 2024 | Carmel English School, Kemmannu

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Kemmannu Channel - Ktv Live Stream - To Book - Contact Here

Click here for Kemmannu Knn Facebook Link
Sponsored Albums
Exclusive
GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..

Monti Phest: A Rich Heritage of South Canara - By Fr. Anush D’Cunha SJ

Ishney Fernandes Releases Heartfelt Cover of Konkani Hymn "Ophir Bhangaran Nesun"

Kemmannu ICYM Youths Meet Elders on World Day for Grandparents and Elders.

Rev. Msgr. Ferdinand Gonsalves Takes charge as Parish Priest and Rector of Milagres Cathedral, Kallianpur

Thousands of admirers bid tearful adieus to their most loved priest: Very Rev Fr Valerian Mendonca.
